ಶೋಭಾ ರಾವ್
ಶೋಭಾ ರಾವ್
'ಮಲೆನಾಡಿನ ಮಳೆ ಹುಡುಗಿ' ಶೋಭಾ ರಾವ್ ಉತ್ಸಾಹದ ಚಿಲುಮೆ. ಬರವಣಿಗೆಯಲ್ಲಿ, ಕನ್ನಡ ಪ್ರೀತಿಯಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಇವರ ಸಕ್ರಿಯ ಭಾಗವಹಿಕೆ ಆಪ್ತಭಾವ ಹುಟ್ಟಿಸುವಂತದ್ದು.
ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಚಿಕ್ಕಂದಿನಿಂದ ಓದುವ, ಬರೆಯುವ ಹವ್ಯಾಸ ಜೊತೆಗೂಡಿಸಿಕೊಂಡವರು. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣಗಳು ಮೂಡಿಬರುತ್ತಿವೆ.
ಶೋಭಾ ರಾವ್ ಅವರ ಪ್ರಕಟಿತ ಕೃತಿಗಳಲ್ಲಿ ಕ್ಷತ್ರಿಯ ಕುಲವತಂಸ, ಮಹಾ ಮಾರಣಹೋಮ!, ಹನಿ ಕಡಿಯದ ಮಳೆ, ಮಲೆನಾಡ ಅಜ್ಜಿ ಮುಂತಾದವು ಸೇರಿವೆ. ಧೃತಿ ಮಹಿಳಾ ಮಾರುಕಟ್ಟೆ ಸಂಘಟನೆಯ 'ಧೃತಿಗೆಡದ ಹೆಜ್ಜೆಗಳು' ಕೃತಿಯ ನಿರೂಪಣೆಯೂ ಇವರ ಕಾಯಕದಲ್ಲಿ ಸೇರಿದೆ. 'ವೀರಲೋಕ ಪುಸ್ತಕ ಸಂತೆ'ಯಲ್ಲಿನ ಚಟುವಟಿಕೆಗಳಲ್ಲಿಯೂ ಇವರ ಕ್ರಿಯಾಶೀಲ ಭಾಗವಹಿಕೆ ಇದೆ.
ನಮ್ಮೆಲ್ಲರಿಗೆ ಸ್ಫೂರ್ತಿ ತುಂಬುವಂತಹ ಉತ್ಸಾಹದ ಚಿಲುಮೆ ಶೋಭಾ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Belated happy birthday Shobha Rao 🌷🌷🌷

ಕಾಮೆಂಟ್‌ಗಳು