ಗುರುರಾಜ ಕೊಡ್ಕಣಿ
ಗುರುರಾಜ ಕೊಡ್ಕಣಿ ನಮ್ಮ ನಡುವಿನ ಮನೋಜ್ಞ ಚಿಂತಕ ಮತ್ತು ಬರಹಗಾರರಲ್ಲಿ ಒಬ್ಬರು. ಕಥೆ, ಕಾದಂಬರಿಗಳು ಮತ್ತು ಅಂಕಣಗಳಿಗೆ ಹೆಸರಾಗಿರುವ ಇವರ ದೈನಂದಿನ ಸೋಷಿಯಲ್ ಮೀಡಿಯಾ ಬರಹಗಳು ಕೂಡಾ ಅನುಪಮವಾದ ಅಂಕಣಗಳಂತೆಯೇ ಜನಪ್ರಿಯವಾಗಿವೆ.
ಜನವರಿ 18, ಗುರುರಾಜ ಕೊಡ್ಕಣಿ ಅವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಇವರ ಹುಟ್ಟೂರು.
ಇವರು ಓದಿದ್ದು ಇಂಜಿನಿಯರಿಂಗ್. ಪ್ರಸ್ತುತ ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಗುರುರಾಜ ಕೊಡ್ಕಣಿ ಅವರು ತಮ್ಮ ಕುಟುಂಬದೊಡನೆ ಬೆಂಗಳೂರಿನಲ್ಲಿ ವಾಸವಿದ್ದಾರೆ.
'ಹಾಯ್ ಬೆಂಗಳೂರು' ಮತ್ತು 'ಹಿಮಾಗ್ನಿ' ವಾರಪತ್ರಿಕೆಗಳ ಅಂಕಣಕಾರರಾಗಿ ಬರಹದ ಬದುಕು ಆರಂಭಿಸಿದ ಗುರುರಾಜ ಕೊಡ್ಕಣಿ ಅವರು ಕಥೆ - ಕಾದಂಬರಿಕಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಸಾಧನೆ ಮಾಡಿದ್ದಾರೆ.
ಗುರುರಾಜ ಕೊಡ್ಕಣಿ ಅವರ ಪ್ರಕಟಿತ ಕೃತಿಗಳಲ್ಲಿ 'ಪ್ರತಿಜ್ಞೆ', 'ವಿಕ್ಷಿಪ್ತ', 'ಅತಿಮಾನುಷ' ಎಂಬ ಕಾದಂಬರಿಗಳು; 'ಅಂಕಣಕ್ಕೆ ಅನುವಾದಿತ ಕತೆಗಳು' ಎನ್ನುವ ಇಂಗ್ಲಿಷ್ ಸಣ್ಣಕತೆಗಳ ಅನುವಾದಿತ ಕಥಾಸಂಕಲನ, ಸತ್ಯಘಟನೆಗಳ ಆಧಾರಿತ ಹಾರರ್ ಕಥಾನಕಗಳ ಸಂಕಲನ 'ಪ್ಯಾರಾ ನಾರ್ಮಲ್', 'ಶ್..! ಇಲ್ಯಾರೋ ಇದ್ದಾರೆ..!!' ಎಂಬ ಥ್ರಿಲ್ಲರ್ ಕಿರುಗತೆಗಳ ಸಂಕಲನ, 'ಶತಕಂಪಿನೀ' ಎನ್ನುವ ನ್ಯಾನೋ ಕಥಾಸಂಕಲನ;
'ಹೆಕ್ಕಿ ತಂದ ನೆನಪುಗಳು' ಎಂಬ ನೆನಪುಗಳ ಸಂಕಲನ ಸೇರಿವೆ. ಲಘು ಹರಟೆಯ ಶೈಲಿಯ ಬರಹಗಳ ಸಂಕಲನ 'ಸವಿಸವಿನೆನಪು, ಸಾವಿರ ನೆನಪು' ಎನ್ನುವ ಇ-ಬುಕ್ ಸಹ ಪ್ರಕಟಗೊಂಡಿದೆ.
ಸರಳ ಸಹೃದಯಿ ಪ್ರತಿಭಾನ್ವಿತ ಸಾಧಕರಾದ ಗುರುರಾಜ ಕೊಡ್ಕಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Gururaja Kodkani

ಕಾಮೆಂಟ್‌ಗಳು