ತೂಗುದೀಪ ಶ್ರೀನಿವಾಸ್
ತೂಗುದೀಪ ಶ್ರೀನಿವಾಸ್
ತೂಗುದೀಪ ಶ್ರೀನಿವಾಸ್ ಕನ್ನಡ ಚಲನಚಿತ್ರರಂಗ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು.
ಶ್ರೀನಿವಾಸ್ ಅವರು 1943ರ ಏಪ್ರಿಲ್ 17ರಂದು ಜನಿಸಿದರು. ತಂದೆ ಮುನಿಸ್ವಾಮಿ. ತಾಯಿ ಪಾರ್ವತಮ್ಮ. ಈ ದಂಪತಿಯ ಎಂಟು ಮಕ್ಕಳಲ್ಲಿ ಶ್ರೀನಿವಾಸ ನಾಲ್ಕನೆಯವರು. ಚಿಕ್ಕಂದಿನಲ್ಲೇ ತಂದೆ ತಾಯಿ ನಿಧನರಾದರು.
ಶ್ರೀನಿವಾಸ್ ಅವರಿಗೆ ಶಾಲಾ ಕಾಲೇಜಿನ ದಿನಗಳಿಂದಲೇ ಅಭಿನಯದಲ್ಲಿ ಆಸಕ್ತಿ ಮೂಡಿತು. ಒಮ್ಮೆ ಮಹಾನ್ ನಟ ಎಂ. ಪಿ. ಶಂಕರ್ ಅವರ ಕಣ್ಣಿಗೆ ಬಿದ್ದ ಇವರು, ನಿರಂತರ ಅವರ ನಾಟಕ ತಂಡದ ಸದಸ್ಯರಾದರು. ಅಭಿನಯಕ್ಕೆ ಹೆಚ್ಚು ಗಮನ ಹೋಗಿ ಬಿಎಸ್.ಸಿ
ಓದನ್ನು ಅರ್ಧಕ್ಕೆ ಬಿಟ್ಟರು.
ಶ್ರೀನಿವಾಸ್ ಅವರು 1966ರಲ್ಲಿ ಕೆ ಎಸ್ ಎಲ್ ಸ್ವಾಮಿ ಅವರ 'ತೂಗುದೀಪ' ಚಿತ್ರದಲ್ಲಿ ಮೊದಲು ಚಿತ್ರರಂಗವನ್ನು ಪ್ರವೇಶಿಸಿ ತೂಗದೀಪ ಶ್ರೀನಿವಾಸ್ ಎಂದೇ ಪ್ರಸಿದ್ಧರಾದರು. ಮುಂದೆ ಅವರು ನೂರಾರು ಕನ್ನಡ ಚಿತ್ರಗಳಲ್ಲಿ ಖಳನಾಯಕ ಪಾತ್ರವಹಿಸಿದ್ದರು. ಪೋಷಕ ಪಾತ್ರಗಳನ್ನೂ ಸಹಜವೆಂಬಂತೆ ನಟಿಸುತ್ತಿದ್ದ ಅವರ ಸಾಮರ್ಥ್ಯ ಅಪಾರವಾಗಿತ್ತು.
ತೂಗುದೀಪ ಶ್ರೀನಿವಾಸ್ 🤝 ಮೀನಾ ದಂಪತಿಗೆ ದರ್ಶನ್, ದಿನಕರ್ ಮತ್ತು ದಿವ್ಯಾ ಅವರು ಮಕ್ಕಳು.
ತೂಗುದೀಪ ಶ್ರೀನಿವಾಸ್ ಅವರು 1995 ರ ಅಕ್ಟೋಬರ್ 16ರಂದು ಇನ್ನೂ ತಮ್ಮ 52ರ ವಯಸ್ಸಿನಲ್ಲಿ ನಿಧನರಾದರು. ಅವರು ಶ್ರದ್ಧೆಯಿಂದ ಅಭಿನಯಿಸಿದ ಅನೇಕ ಪಾತ್ರಗಳು ಇಂದಿಗೂ ಕಣ್ತುಂಬುವಂತಿವೆ.
On the birth anniversary of Great actor Thoogudeepa Srinivas 🌷🙏🌷

ಕಾಮೆಂಟ್‌ಗಳು