ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಎನ್‌. ಪಣಿಕ್ಕರ್


ಕೆ.ಎನ್‌. ಪಣಿಕ್ಕರ್‌ ನಿಧನ


ಪ್ರಸಿದ್ಧ ಇತಿಹಾಸಕಾರ, ಚಿಂತಕ ಕೆ.ಎನ್‌. ಪಣಿಕ್ಕರ್‌ ನಿಧನರಾಗಿದ್ದಾರೆ.  ಪಣಿಕ್ಕರ್‌ ಅವರು ಆಧುನಿಕ ಭಾರತೀಯ ಇತಿಹಾಸದ ಬರವಣಿಗೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದು, ವಸಾಹತುಶಾಹಿ ಸಮಾಜ, ಸಾಮಾಜಿಕ ಚಳವಳಿಗಳು, ಸಂಸ್ಕೃತಿ, ಧರ್ಮ ಮತ್ತು ರಾಜಕೀಯದ ನಡುವಿನ ಸಂಬಂಧಗಳ ಕುರಿತು ಬೆಳಕು ಚೆಲ್ಲಿದವರು.

ಕೇರಳದ ಗುರುವಾಯೂರ್‌ನಲ್ಲಿ ಕೃಷ್ಣನ್‌ ನಾಯರ್‌ ಮತ್ತು ಇಚ್ಚುಟಿ ಅಮ್ಮ ದಂಪತಿಗೆ 1936ರ ಏಪ್ರಿಲ್‌ 26ರಂದು ಜನಿಸಿದ ಪಣಿಕರ್ ಅವರು, ಶಾಲಾ ಶಿಕ್ಷಣವನ್ನು ಚಾವಕ್ಕಾಡ್‌ನಲ್ಲಿ, ಕಾಲೇಜು ಶಿಕ್ಷಣವನ್ನು ಪಾಲಕ್ಕಾಡಿನಲ್ಲಿ ಪೂರ್ಣಗೊಳಿಸಿದರು. ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿ ನಂತರ ಪಿಎಚ್‌.ಡಿ ಗಳಿಸಿದರು. 

ವಸಾಹತುಶಾಹಿ ಭಾರತದಲ್ಲಿನ ಜನಪ್ರಿಯ ಚಳವಳಿಗಳು ಮತ್ತು ನಿರ್ಲಕ್ಷಿತ ಸಮುದಾಯಗಳನ್ನು ಇವರ ಬರಹಗಳು ಕೇಂದ್ರೀಕರಿಸಿದ್ದವು.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಹಲವು ವರ್ಷಗಳ ಕಾಲ ಬೋಧಿಸಿದ್ದ ಪಣಿಕರ್ ಅವರು, ಅಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ಸಮಾಜ ವಿಜ್ಞಾನ ನಿಕಾಯದ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದರು. ಪಣಿಕ್ಕರ್‌ ಅವರು ಕೇರಳದಲ್ಲಿನ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ, ಕೇರಳದ ಐತಿಹಾಸಿಕ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

‘ಎಗೇನ್ಸ್ಟ್‌ ಲಾರ್ಡ್‌ ಅಂಡ್‌ ಸ್ಟೇಟ್‌: ರಿಲಿಜನ್‌ ಅಂಡ್‌ ಪೆಸೆಂಟ್‌ ಅಪ್ರೈಸಿಂಗ್ಸ್‌ ಇನ್‌ ಮಲಬಾರ್‌’, ‘ಕಲ್ಚರ್‌ ಅಂಡ್‌ ಕಾನ್ಷಿಯಸ್‌ನೆಸ್‌ ಇನ್‌ ಮಾಡರ್ನ್‌ ಇಂಡಿಯಾ’, ‘ಎ ಕನ್ಸರ್ನ್ಡ್ ಇಂಡಿಯನ್ಸ್ ಗೈಡ್‌ ಟು ಕಮ್ಯುನಲಿಸಂ’ ಇವರ ಪ್ರಮುಖ ಕೃತಿಗಳಾಗಿವೆ. ಜಾತ್ಯತೀತ ವ್ಯವಸ್ಥೆಯ ರಕ್ಷಣೆ ಮತ್ತು ದಾಖಲೆ ಆಧಾರಿತ ಇತಿಹಾಸ ರಚನೆಗೆ ಅವರು ಹೆಸರುವಾಸಿಯಾಗಿದ್ದರು.

ಕೆ.ಎನ್‌. ಪಣಿಕ್ಕರ್‌ 2026 ಮಾರ್ಚ್ 9ರಂದು ನಿಧನರಾದರು. ಅಗಲಿದ ಮಹಾನ್ ಚೇತನಕ್ಕೆ ನಮನ.🌷🙏🌷

Respects to departed soul Great Historian Dr. K.. Panikkar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ